ಕೀರ್ತನೆಗಳು 131 (Psalms 131)

Kannada Bible — Kannada (ಕನ್ನಡ)

1 (ಯಾತ್ರಾಗೀತೆ) ಹಮ್ಮಿಲ್ಲ ಪ್ರಭು, ನನ್ನೆದೆಯೊಳು I ನನಗಿಲ್ಲ ಸೊಕ್ಕಿನ ಕಣ್ಣುಗಳು II ಶಕ್ತಿಮೀರಿದ ಕಾರ್ಯಕೆ ನಾ ಕೈ ಹಾಕಿಲ್ಲ I ಅಸಾಧ್ಯವಾದುದನು ನಾ ಕೈಗೊಂಡಿಲ್ಲ II

2 ಎಂದೇ ನನ್ನಾತ್ಮ ಸಮಾಧಾನದಿಂದಿದೆ I ಮೌನದಿಂದಿದೆ ತಾಯ್ಮಡಿಲಾ ಕೂಸಂತೆ I ನೆಮ್ಮದಿಯಿಂದಿದೆ ತಾಯ್ಮಡಿಲಾ ಶಿಶುವಂತೆ II

3 ಇಸ್ರಯೇಲೆ, ಪ್ರಭುವಿನಲಿ ನಂಬಿಕೆಯಿಂದಿರು I ಇಂದಿಗೂ ಎಂದೆಂದಿಗೂ ಭರವಸೆಯಿಂದಿರು II

  • Psalms 130 — previous chapter
  • Psalms 132 — next chapter
  • Psalms 131 — English (KJV)
  • Psalms 131 — English (WEB)
  • Psalms 131 — Tamil (தமிழ்)
  • Psalms 131 — Hindi (हिंदी)
  • Psalms 131 — Malayalam (മലയാളം)