Kannada Bible — Kannada (ಕನ್ನಡ)
1 (ಯಾತ್ರಾಗೀತೆ) ಪರಲೋಕದಲಿ ಆಸೀನನಾಗಿರುವ ಪ್ರಭುವೆ I ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ II
2 ದಾಸನ ಕಣ್ಣು ಯಜಮಾನನತ್ತ I ದಾಸಿಯ ಕಣ್ಣು ಯಜಮಾನಿಯತ್ತ II ನನ್ನ ಕಣ್ಣು ಸ್ವಾಮಿದೇವನತ್ತ I ಆತನ ಕಟಾಕ್ಷವನ್ನು ನಿರೀಕ್ಷಿಸುತ್ತಾ II
3 ದಯೆತೋರು ಪ್ರಭು, ನಮಗೆ ದಯೆ ತೋರು I ಅತ್ಯಧಿಕವಾಗಿ ನಾವು ತಿರಸ್ಕೃತರು II
4 ಬೇಸತ್ತಿದೆ ಮನ ಗರ್ವಿಗಳ ನಿಂದೆಯಿಂದ I ಸುಖಭೋಗಿಗಳು ಮಾಡುವ ಅಪಹಾಸ್ಯದಿಂದ II