ಕೀರ್ತನೆಗಳು 43 (Psalms 43)

Kannada Bible — Kannada (ಕನ್ನಡ)

1 (ನೇ ಕೀರ್ತನೆ ಮುಂದುವರಿದುದು) ನಿರ್ಣಯಿಸು ನನ್ನ ನ್ಯಾಯವನು ಓ ದೇವಾ I ವಾದಿಸು ಆ ಭಕ್ತಿಹೀನ ಜನತೆಯ ವಿರುದ್ಧ I ಬಿಡಿಸೆನ್ನನು ವಂಚಕರಿಂದ, ಅಧರ್ಮಿಗಳಿಂದ II

2 ನನಗೆ ಕೋಟೆ ನೀನಲ್ಲವೇ? ನನ್ನ ಕೈ ಬಿಟ್ಟಿರುವೆ ಏಕೆ? I ಶತ್ರು ಬಾಧೆಯಿಂದ ಭಿಕಾರಿಯಂತೆ ನಾನಲೆಯಬೇಕೆ? II

3 ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನ್ನು ನನ್ನ ನಡೆಸಲಿಕ್ಕೆ I ಸೇರಿಸಲೆನ್ನನು ನಿನ್ನ ಪವಿತ್ರ ಪರ್ವತಕೆ, ನಿನ್ನಯ ನಿವಾಸಕೆ II

4 ಬರುವೆನಾಗ ನಿನ್ನ ಬಲಿಪೀಠದ ಬಳಿಗೆ I ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ I ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ II

5 ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ ಪರಮಾತ್ಮ ಆತನೆನಗೆ II

  • Psalms 42 — previous chapter
  • Psalms 44 — next chapter
  • Psalms 43 — English (KJV)
  • Psalms 43 — English (WEB)
  • Psalms 43 — Tamil (தமிழ்)
  • Psalms 43 — Hindi (हिंदी)
  • Psalms 43 — Malayalam (മലയാളം)