Kannada Bible — Kannada (ಕನ್ನಡ)
1 (ಯಾತ್ರಾಗೀತೆ) ಸೋದರರು ಒಂದಾಗಿ ಬಾಳ್ವುದು I ಅದೆಷ್ಟು ಚೆನ್ನ, ಅದೆಷ್ಟು ರಮ್ಯ II
2 ಅದು ರಮ್ಯ, ಸುರಿದ ಸುಗಂಧತೈಲ ಗಡ್ಡಕೆ ಇಳಿವಂತೆ I ಆರೋನನ ಗಡ್ಡದಿಂದ ಅವನ ಕೊರಳಪಟ್ಟಿಗೆ ಇಳಿವಂತೆ II
3 ರಮ್ಯ, ಹೆರ್ಮೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆ I ಸಿಯೋನ್ ಪರ್ವತದ ಮೇಲೆ ಬೀಳುವ ಇಬ್ಬನಿಯಂತೆ II ಆಶೀರ್ವಾದವು, ಅಮರ ಜೀವವು I ಅಲ್ಲೆ ಇರಬೇಕೆಂದು ಆಜ್ಞಾಪಿಸಿಹನು ಪ್ರಭುವು II