Kannada Bible — Kannada (ಕನ್ನಡ)
1 (ಯಾತ್ರಾಗೀತೆ) ಭಜಿಸಿರಿ ಪ್ರಭುವನು ಆತನ ಸಕಲ ಸೇವಕರೇ I ಆತನ ಮಂದಿರದಲಿ ರಾತ್ರಿ ಕಾವಲಿರುವವರೇ II
2 ಭಜಿಸಿರಿ ಪ್ರಭುವನು ಕರಗಳನೆತ್ತಿ I ಪವಿತ್ರಾಲಯದಲಿ ಕೈಗಳನೆತ್ತಿ II
3 ಹರಸಲಿ ಸಿಯೋನಿನಿಂದ ನಿಮ್ಮನು I ಭೂಮ್ಯಾಕಾಶಗಳ ಸೃಜಿಸಿದಾತನು II