ಕೀರ್ತನೆಗಳು 121 (Psalms 121)

Kannada Bible — Kannada (ಕನ್ನಡ)

1 (ಯಾತ್ರಾಗೀತೆ) ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ I ಕೇಳುವೆ : “ನನಗೆ ಒತ್ತಾಸೆ ಎತ್ತಣಿಂದ?” II

2 ನನಗೆ ಒತ್ತಾಸೆ ಪ್ರಭುವಿನಿಂದ I ಭೂಮ್ಯಾಕಾಶ ಸೃಜಿಸಿದವನಿಂದ II

3 ನಿನ್ನ ಕಾಲೆಡವದಂತೆ ನೋಡುವನಾತ I ತೂಕಡಿಸಲಾರನು ನಿನ್ನ ಕಾಯುವಾತ II

4 ಇಗೋ, ಇಸ್ರಯೇಲನು ಕಾಯುವಾತನು I ನಿದ್ರಿಸಲಾರನು, ತೂಕಡಿಸಲಾರನು II

5 ನಿನ್ನನು ಕಾಯುತಿಹನು ಪ್ರಭುವೇ I ಬಲಗಡೆ ನೆರಳಂತಿಹನು ವಿಭುವೇ II

6 ನಿನ್ನ ಬಾಧಿಸನು ಸೂರ್ಯನು ಹಗಲೊಳು I ನಿನ್ನ ಪೀಡಿಸನು ಚಂದ್ರನು ಇರುಳೊಳು II

7 ಪ್ರಭು ಕಾಯುವನು ನಿನ್ನ ಪ್ರಾಣವನು I ಸಕಲ ಕೇಡಿನಿಂದ ಕಾಪಾಡುವನು II

8 ಪ್ರಭು ಕಾಯುವನು ನಿನ್ನ ಆಗುಹೋಗುಗಳನು I ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು II

  • Psalms 120 — previous chapter
  • Psalms 122 — next chapter
  • Psalms 121 — English (KJV)
  • Psalms 121 — English (WEB)
  • Psalms 121 — Tamil (தமிழ்)
  • Psalms 121 — Hindi (हिंदी)
  • Psalms 121 — Malayalam (മലയാളം)