ಜಕರ್ಯ 7 (Zechariah 7)

Kannada Bible — Kannada (ಕನ್ನಡ)

1 ಅರಸನಾದ ಡೇರಿಯಸನ ಆಳ್ವಿಕೆಯ ನಾಲ್ಕನೆಯ ವರ್ಷದ ಒಂಭತ್ತನೆಯ ತಿಂಗಳ (ಅಂದರೆ ಕಿಸ್ಲೇವ್ ತಿಂಗಳಿನ) ನಾಲ್ಕನೆಯ ದಿನದಲ್ಲಿ [] ಸರ್ವೇಶ್ವರ ಜೆಕರ್ಯನಿಗೆ ಒಂದು ಸಂದೇಶವನ್ನು ಅನುಗ್ರಹಿಸಿದರು.

2 ಅಷ್ಟರಲ್ಲಿ ಬೇತೇಲಿನ ಜನರು ಸರೆಚರನನ್ನು ರೆಗೆಮ್ ಮೆಲೆಕ್‍ನನ್ನು ಹಾಗೂ ಅವನ ಪರಿಜನರನ್ನು ಸರ್ವೇಶ್ವರಸ್ವಾಮಿಯ ಆಶೀರ್ವಾದವನ್ನು ಕೋರಲು ದೇವಾಲಯಕ್ಕೆ ಕಳುಹಿಸಿದ್ದರು.

3 ಅಲ್ಲದೆ, ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ದೇವಾಲಯದ ಯಾಜಕರನ್ನೂ ಪ್ರವಾದಿಗಳನ್ನೂ ಕಂಡು, “ನಾವು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬಂದಂತೆ, ನೆಯ ತಿಂಗಳಲ್ಲಿ ಉಪವಾಸವಿದ್ದು ಪ್ರಲಾಪಿಸಬೇಕೋ?” ಎಂದು ವಿಚಾರಿಸಿಕೊಂಡು ಬರಬೇಕೆಂದು ಅವರಿಗೆ ಆಜ್ಞಾಪಿಸಿದರು.

4 ಇಂತಿರಲು, ಸೇನಾಧೀಶ್ವರ ಸರ್ವೇಶ್ವರ ನನಗೆ ಈ ಸಂದೇಶವನ್ನು ದಯಪಾಲಿಸಿದರು”

5 “ಯಾಜಕರಿಗೂ ನಾಡಿನ ಸಕಲ ಜನರಿಗೂ ಹೀಗೆಂದು ತಿಳಿಸಲು: ನೀವು ಕಳೆದ ಎಪ್ಪತ್ತು ವರ್ಷಗಳಿಂದ ನೇ ಮತ್ತು ನೇ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡಿದ್ದು ನನಗೋಸ್ಕರವೋ?

6 ನೀವು ಭೋಜನ ಮಾಡಿದ್ದು, ಪಾನಮಾಡಿದ್ದು ನಿಮ್ಮ ತೃಪ್ತಿಗಾಗಿಯೇ ಅಲ್ಲವೆ?”

7 “ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳು ಜನಭರಿತವಾಗಿ ನೆಮ್ಮದಿಯಿಂದಿದ್ದಾಗ ಹಾಗೂ ದಕ್ಷಿಣ ಪ್ರಾಂತ್ಯದಲ್ಲೂ ಬಯಲು ಪ್ರದೇಶದಲ್ಲೂ ಪ್ರಜೆಯು ತುಂಬಿದ್ದಾಗ ಪ್ರವಾದಿಗಳ ಮುಖಾಂತರ ಪ್ರಕಟಿಸಿದ ಸಂದೇಶ ಇದೇ ಅಲ್ಲವೆ?”

8 ಅಲ್ಲದೆ ಸರ್ವೇಶ್ವರ ಜೆಕರ್ಯನಿಗೆ ಕೊಟ್ಟ ಸಂದೇಶ ಏನೆಂದರೆ:

9 :ಸತ್ಯಾನುಸಾರ ನ್ಯಾಯತೀರಿಸಿರಿ.

10 ಒಬ್ಬರಿಗೊಬ್ಬರು ಪ್ರೀತಿ ಕರುಣೆಯನ್ನು ತೋರಿಸಿರಿ. ವಿಧವೆಯರು, ಅನಾಥರು, ವಿದೇಶಿಯರು, ಬಡವರು, ಇವರಾರನ್ನೂ ಶೋಷಣೆಮಾಡಬೇಡಿ. ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.

11 “ನಿಮ್ಮ ಪೂರ್ವಜರು ಕಿವಿಗೊಡದೆಹೋದರು: ಹಟಮಾರಿಗಳಾದರು; ಮಂದಮತಿಗಳಾದರು; ಅವರ ಹೃದಯ ಗೋರ್ಕಲ್ಲಿನಂತೆ ಆಯಿತು.

12 ಧರ್ಮಶಾಸ್ತ್ರವನ್ನಾಗಲೀ ಪೂರ್ವಕಾಲದ ಪ್ರವಾದಿಗಳ ಮುಖಾಂತರ, ಸೇನಾಧಿಶ್ವರ ಸರ್ವೇಶ್ವರ ಆದ ನಾನು ತಿಳಿಸಿದ ನನ್ನಾತ್ಮಪ್ರೇರಿತ ಮಾತುಗಳನ್ನಾಗಲೀ ಕೇಳದೆಹೋದರು. ಹೀಗೆ ನನ್ನ ಕಡುಕೋಪಕ್ಕೆ ಗುರಿಯಾದರು.

13 ಆಗ ಹೀಗೆಂದೆ: ‘ನಾನು ಕೂಗಿದಾಗ ಅವರು ಕೇಳದೆಹೋದರು; ಅವರು ಕೂಗಿದಾಗ ನಾನು ಕೇಳಲಿಲ್ಲ.’

14 ಬಿರುಗಾಳಿಯಂತೆ ಅವರನ್ನು ಅಪರಿಚಿತ ಜನಾಂಗಗಳ ಮಧ್ಯೆ ತೂರಿ ಚದರಿಬಿಟ್ಟೆ; ಹಾಗೆ ಅವರು ಚದರಿಹೋದ ಮೇಲೆ ನಾಡು ಹಾಳಾಯಿತು. ಅಲ್ಲಿ ಯಾರೂ ಉಳಿಯದಂತಾಯಿತು. ಅವರ ನಿಮಿತ್ತ ಚೆಲುವ ನಾಡು ನಿರ್ಜನ ಪ್ರದೇಶವಾಯಿತು.”

  • Zechariah 6 — previous chapter
  • Zechariah 8 — next chapter
  • Zechariah 7 — English (KJV)
  • Zechariah 7 — English (WEB)
  • Zechariah 7 — Tamil (தமிழ்)
  • Zechariah 7 — Hindi (हिंदी)
  • Zechariah 7 — Malayalam (മലയാളം)