ಕೀರ್ತನೆಗಳು 82 (Psalms 82)

Kannada Bible — Kannada (ಕನ್ನಡ)

1 ಸ್ವರ್ಗಸಭೆಯಲಿ ದೇವ ಅಗ್ರಸ್ಥಾನ ವಹಿಸಿಹನು I ದೇವರುಗಳ ಸಮೂಹದಲಿ ನ್ಯಾಯವಿಚಾರಿಸುತಿಹನು II

2 “ಎಲ್ಲಿಯತನಕ ನೀಡುವಿರಿ ಅನ್ಯಾಯವಾದ ತೀರ್ಪನು? I ಎಲ್ಲಿಯವರೆಗೆ ತೋರುವಿರಿ ದುಷ್ಟರಿಗೆ ಪಕ್ಷಪಾತವನು? II

3 ಅಬಲರಿಗೆ, ಅನಾಥರಿಗೆ ದೊರಕಿಸಿರಿ ನ್ಯಾಯವನು I ಕಾದಿರಿಸಿರಿ ದೀನದಲಿತರ ಹಕ್ಕು ಬಾಧ್ಯತೆಯನು II

4 ಬಿಡುಗಡೆಮಾಡಿರಿ ದೀನ ಬಡಬಗ್ಗರನು I ದುರುಳರ ಕೈಯಿಂದ ರಕ್ಷಿಸಿರಿ ಅವರನು II

5 ಬುದ್ಧಿಹೀನರು, ಮಂದಮತಿಗಳು, ಕತ್ತಲಲಿ ನಡೆವವರು ನೀವು I ಇದರಿಂದಲೆ ಕದಲುತ್ತಿರುವುವು ಧರೆಯ ಅಸ್ತಿವಾರಗಳು II

6 ‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಪರನ ಮಕ್ಕಳು’ ನಾನೆಂದೆ I ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ ಬರಿ ಮಾನವರಂತೆ” II

8 ಎದ್ದೇಳು ದೇವ, ಸ್ಥಾಪಿಸು ನ್ಯಾಯವನು ಧರೆಯೊಳು I ನಿನ್ನ ಸೊತ್ತಾಗಿವೆಯಲ್ಲವೆ ಸಮಸ್ತ ರಾಷ್ಟ್ರಗಳು II

  • Psalms 81 — previous chapter
  • Psalms 83 — next chapter
  • Psalms 82 — English (KJV)
  • Psalms 82 — English (WEB)
  • Psalms 82 — Tamil (தமிழ்)
  • Psalms 82 — Hindi (हिंदी)
  • Psalms 82 — Malayalam (മലയാളം)