ಕೀರ್ತನೆಗಳು 70 (Psalms 70)

Kannada Bible — Kannada (ಕನ್ನಡ)

1 ಕರುಣೆಯಿಂದೆನ್ನನು ದೇವಾ, ರಕ್ಷಿಸು I ತ್ವರೆಯಾಗಿ ಬಂದು ಪ್ರಭು, ಉದ್ಧರಿಸು II

2 ಪಡಲಿ ಮಾನಭಂಗ ನನ್ನ ಹತ್ಯವನು ಕೋರುವವರು I ನಾಚಿ ಓಡಲಿ ಹಿಂದಕೆ ನನಗಾಪತ್ತನು ಬಯಸುವವರು I

3 “ಆಹಾಹಾ” ಎಂದೆನ್ನ ಜರೆಯುವವರು I ಬೆಂಗೊಟ್ಟು ಓಡಲಿ ಆ ಲಜ್ಜೆಗೆಟ್ಟವರು II

4 ನಿನ್ನ ದರ್ಶನಾರ್ಥಿಗಳು ಹರ್ಷಿಸಲಿ, ನಿನ್ನಲಿ ನಲಿದು ಆನಂದಿಸಲಿ I ನಿನ್ನ ಉದ್ಧಾರಕ ಶಕ್ತಿ ಪ್ರಿಯರು ಸತತ “ದೇವನಿಗೆ ಉಘೇ” ಎನ್ನಲಿ II

5 ದೇವಾ, ನಾ ದಿಕ್ಕಿಲ್ಲದವನು, ಕುಗ್ಗಿದವನು, ನನ್ನ ಬಳಿಗೆ ಬಾ I ನೀನೆನಗೆ ಸಹಾಯಕನು, ರಕ್ಷಕನು ಪ್ರಭು, ತಡಮಾಡದೆ ಬಾ II

  • Psalms 69 — previous chapter
  • Psalms 71 — next chapter
  • Psalms 70 — English (KJV)
  • Psalms 70 — English (WEB)
  • Psalms 70 — Tamil (தமிழ்)
  • Psalms 70 — Hindi (हिंदी)
  • Psalms 70 — Malayalam (മലയാളം)