ಕೀರ್ತನೆಗಳು 146 (Psalms 146)

Kannada Bible — Kannada (ಕನ್ನಡ)

1 ಪ್ರಭುವಿಗೆ ಸ್ತುತಿಸ್ತೋತ್ರ ಅಲ್ಲೆಲೂಯ I ಮನವೇ, ವಂದಿಸು ಆತನನು ಅಲ್ಲೆಲೂಯ II

2 ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು I ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು II

3 ನಂಬಬೇಡ ಅಧಿಕಾರಿಯನು I ನೆಚ್ಚಬೇಡ ನರಮಾನವನನು I ಉದ್ಧರಿಸಲು ಅಸಮರ್ಥನವನು II

4 ಉಸಿರುಹೋದುದೇ ಮರಳುತ್ತಾನವನು ಮಣ್ಣಿಗೆ I ಅಂದೇ ಅಳಿಯುತ್ತದೆ ಅವನೆಲ್ಲಾ ಯೋಜನೆ II

5 ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು I ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು II

6 ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ I ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ II

7 ದೊರಕಿಸುವನು ನ್ಯಾಯ ದಲಿತರಿಗೆ I ಒದಗಿಸುವನು ಆಹಾರ ಹಸಿದವರಿಗೆ I ನೀಡುವನು ಬಿಡುಗಡೆ ಬಂಧಿತರಿಗೆ II

8 ಕಣ್ಣನ್ನೀಯುವನು ಪ್ರಭು ಕುರುಡರಿಗೆ I ಉದ್ಧಾರಕನಾ ಪ್ರಭು ಕುಗ್ಗಿದವರಿಗೆ I ಆತನ ಒಲವಿರುವುದು ಸಾಧು ಸಜ್ಜನರಿಗೆ II

9 ರಕ್ಷಿಸುವನು ಪ್ರಭು ಪರದೇಶಿಗಳನು I ಆದರಿಸುವನು ಅನಾಥರನು, ವಿಧವೆಯರನು I ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು II

10 ಪ್ರಭುವೇ ಅರಸನು ಸದಾಕಾಲಕು I ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು I ಅಲ್ಲೆಲೂಯ! II

  • Psalms 145 — previous chapter
  • Psalms 147 — next chapter
  • Psalms 146 — English (KJV)
  • Psalms 146 — English (WEB)
  • Psalms 146 — Tamil (தமிழ்)
  • Psalms 146 — Hindi (हिंदी)
  • Psalms 146 — Malayalam (മലയാളം)