ಕೀರ್ತನೆಗಳು 129 (Psalms 129)

Kannada Bible — Kannada (ಕನ್ನಡ)

1 (ಯಾತ್ರಾಗೀತೆ) ಯೌವನಾರಭ್ಯ ಶತ್ರುಕಾಡಿದ್ದು ಎಂತೆಂದು I ಇಸ್ರಯೇಲ್ ಜನಾಂಗ ವರದಿ ಮಾಡಲಿ ನಮಗಿಂದು II

2 ಯೌವನಾರಭ್ಯ ನನ್ನನು ಎನಿತೋ ಬಾಧಿಸಿಹರು I ನನ್ನ ಮೇಲಾದರೋ ಜಯಗಳಿಸಲಿಲ್ಲ ಅವರು II

3 ಉಳುವವರು ಎನ್ನ ಬೆನ್ನನೆ ಉತ್ತಿರುವರು I ಆಳವಾದ ಗಾಯಗೆರೆಗಳನ್ನು ಮಾಡಿಹರು II

4 ನಮ್ಮ ಪ್ರಭುವಾದರೋ ಸತ್ಯಸ್ವರೂಪನು I ಕಡಿದಿಹನು ದುರುಳರು ಹಾಕಿದ ಕಟ್ಟುಗಳನು II

5 ಸಿಯೋನನ್ನು ದ್ವೇಷಿಸುವ ಜನ I ಹಿಂದಿರುಗಲಿ ಪಡೆದು ಅಪಮಾನ II

6 ಅವರಾಗಲಿ ಮಾಳಿಗೆ ಮೇಲಿನ ಹುಲ್ಲಿನಂತೆ I ಒಣಗಿಹೋಗುವುದದು ಹೂ ಬಿಡುವುದಕ್ಕೆ ಮುಂಚೆ II

7 ತುಂಬುವುದಿಲ್ಲಾ ಕೊಯ್ಯುವವನ ಹಿಡಿಯು I ಅದರ ಸಿವುಡು ಕಟ್ಟುವವನಾ ಮಡಿಲು II

8 ‘ಪ್ರಭು ನಿನ್ನನು ಆಶೀರ್ವದಿಸಲಿ’ ಎಂಬ ಮಾತನ್ನಾಗಲಿ I ‘ಪ್ರಭು ನಾಮದಲಿ ನಿನಗೆ ಶುಭ’ ಎಂದಾಗಲಿ I ಹಾದುಹೋಗುವ ಜನಜಂಗುಳಿ ಅವರಿಗೆ ಹೇಳದಿರಲಿ” II

  • Psalms 128 — previous chapter
  • Psalms 130 — next chapter
  • Psalms 129 — English (KJV)
  • Psalms 129 — English (WEB)
  • Psalms 129 — Tamil (தமிழ்)
  • Psalms 129 — Hindi (हिंदी)
  • Psalms 129 — Malayalam (മലയാളം)