ಕೀರ್ತನೆಗಳು 113 (Psalms 113)

Kannada Bible — Kannada (ಕನ್ನಡ)

1 ಅಲ್ಲೆಲೂಯ I ಪ್ರಭುವಿನ ದಾಸರೇ, ಸ್ತುತಿಮಾಡಿ I ಪ್ರಭುವಿನ ನಾಮಸ್ತುತಿಯನು ಮಾಡಿ II

2 ಪ್ರಭುವಿನ ಸಿರಿನಾಮವು ಪೂಜ್ಯ I ಇಂದಿಗೂ ಎಂದೆಂದಿಗೂ ಪೂಜ್ಯ II

3 ಪ್ರಭುವಿನಾ ಸಿರಿನಾಮವು ಸ್ತುತ್ಯ I ಪೂರ್ವ ಪಶ್ಚಿಮದವರೆಗೂ ಸ್ತುತ್ಯ II

4 ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ I ಆತನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ II

5 ನಮ್ಮ ಪ್ರಭು ದೇವನಂತೆ ಯಾರು ಸಮರ್ಥ I ಉನ್ನತದಲಿ ಆಸನಾರೂಢನು ಆತ I ಇಹಪರಗಳನು ವೀಕ್ಷಿಸಲಾತ ಶಕ್ತ II

7 ದೀನರನು ಎಬ್ಬಿಸುವನು ಧೂಳಿನಿಂದ I ಬಡವರನು ಎತ್ತುವನು ತಿಪ್ಪೆಯಿಂದ II

8 ಕೂರಿಸುವನಾತ ಅವರನು ಅಧಿಪತಿಗಳ ನಡುವೆ I ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ II

9 ಬಂಜೆಯಾದವಳನು ಮಕ್ಕಳ ತಾಯಾಗಿಸುವನು I ಆನಂದದಿಂದಾಕೆ ಬೆಳಗಿಸುವಳಾ ಮನೆಯನು II

  • Psalms 112 — previous chapter
  • Psalms 114 — next chapter
  • Psalms 113 — English (KJV)
  • Psalms 113 — English (WEB)
  • Psalms 113 — Tamil (தமிழ்)
  • Psalms 113 — Hindi (हिंदी)
  • Psalms 113 — Malayalam (മലയാളം)