ಕೀರ್ತನೆಗಳು 1 (Psalms 1)

Kannada Bible — Kannada (ಕನ್ನಡ)

1 ದುರ್ಜನರ ಆಲೋಚನೆಯಂತೆ ನಡೆಯದೆ I ಪಾಪಾತ್ಮರ ಪಥದಲಿ ಕಾಲೂರದೆ I ಧರ್ಮನಿಂದಕರ ಕೂಟದಲಿ ಕೂರದೆ II

2 ಪ್ರಭುವಿನ [] ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು I ಹಗಲಿರುಳೆನ್ನದೆ ಅದನೆ ಧ್ಯಾನಿಸುತಿರುವವನಾರೋ ಅವನೇ ಧನ್ಯನು II

3 ನದಿಯ ಬದಿಯಲೇ ಬೆಳೆದಿಹ ಮರದಂತೆ I ಸಕಾಲಕೆ ಫಲವೀವ ವೃಕ್ಷದಂತೆ I ಎಲೆಬಾಡದೆ ಪಸಿರಿರುವ ತರುವಂತೆ I ಸಿಗುವುದು ಅವನ ಕಾರ್ಯಗಳಿಗೆ ಸಫಲತೆ II

4 ದುರುಳರಾದರೊ ತೂರಿ ಹೋಗುವರು I ಬಿರುಗಾಳಿಗೆ ತರಗೆಲೆಯಾಗುವರು II

5 ಎಂದೇ ನಿಲ್ಲಲಾರರು ದುರುಳರು ನ್ಯಾಯಸ್ಥಾನದಲಿ I ಸದಸ್ಯರಾಗರು ಪಾಪಿಗಳು ಸಜ್ಜನರ ಸಂಘದಲಿ II

6 ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ I ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ II

  • Job 42 — previous chapter
  • Psalms 2 — next chapter
  • Psalms 1 — English (KJV)
  • Psalms 1 — English (WEB)
  • Psalms 1 — Tamil (தமிழ்)
  • Psalms 1 — Hindi (हिंदी)
  • Psalms 1 — Malayalam (മലയാളം)