ಯೆಹೋಶುವ 12 (Joshua 12)

Kannada Bible — Kannada (ಕನ್ನಡ)

1 ಇಸ್ರಯೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನು ಮತ್ತು ಕಣಿವೆ ಪ್ರದೇಶದ ಪೂರ್ವಭಾಗವನ್ನು ಸ್ವಾಧೀನಮಾಡಿಕೊಂಡರು. ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.

2 ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು. ಇವನ ರಾಜ್ಯ, ಅರ್ನೋನ್ ಕಣಿವೆಯ ಅಂಚಿನಲ್ಲಿ ಇರುವ ಅರೋಯೇರ್ ನಗರವನ್ನು ಮತ್ತು ಆ ಕಣಿವೆಯಲ್ಲೇ ಇರುವ ನಗರವನ್ನು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ನದಿಯ ತನಕವಿರುವ ಗಿಲ್ಯಾದಿನ ಅರ್ಧಪ್ರಾಂತ್ಯ,

3 ಹಾಗೂ ಜೋರ್ಡನ್ ನದಿಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣ ಸಮುದ್ರ (ಮೃತ್ಯುಕಡಲು) ಎಣಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ಕಣಿವೆ ಪ್ರದೇಶ ಇವುಗಳಿಂದ ಕೂಡಿತ್ತು.

4 ಅಷ್ಟರೋತ್ ಹಾಗೂ ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ವಧಿತರಾದವರಲ್ಲಿ ಎರಡನೆಯವನು.

5 ಇವನ ರಾಜ್ಯ, ಹೆರ್ಮೋನ್ ಮಲೆನಾಡು, ಸಲ್ಕಾನಗರ, ಗೆಷೂರ್ಯರ ಮತ್ತು ಮಾಕತೀಯರ ಮೇರೆಯವರೆಗಿದ್ದ ಬಾಷಾನ್ ನಾಡು, ಹೆಷ್ಬೋನಿನ ಅರಸನದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧಪ್ರಾಂತ್ಯ ಇವುಗಳಿಂದ ಕೂಡಿತ್ತು.

6 ಸರ್ವೇಶ್ವರನ ದಾಸ ಮೋಶೆ ಇಸ್ರಯೇಲರ ಸಹಿತವಾಗಿ ಈ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ ಗಾದ್ಯರಿಗೂ ಮತ್ತು ಮನಸ್ಸೆಕುಲದ ಅರ್ಧಜನರಿಗೂ ಶಾಶ್ವತ ಸೊತ್ತಾಗಿ ಕೊಟ್ಟನು.

7 ಯೆಹೋಶುವನು ಇಸ್ರಯೇಲರ ಸಮೇತ, ಜೋರ್ಡನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶ,

8 ಇಳಿಜಾರಿನ ಪ್ರದೇಶ, ಕಣಿವೆ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣಪ್ರಾಂತ್ಯ ಇವುಗಳನ್ನೂ ಇವುಗಳನ್ನು ಆಳುತ್ತಿದ್ದ ಹಿತ್ತೀಯ, ಅಮೋರಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ ಅವರ ನಾಡುಗಳನ್ನು ಇಸ್ರಯೇಲ್ ಕುಲಭಾಗಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ :

9 ಜೆರಿಕೋವಿನ ಅರಸ - ಬೇತೇಲಿನ ಹತ್ತಿರವಿರುವ ಆಯಿ ಎಂಬ ಊರಿನ ಅರಸ -

10 ಜೆರೂಸಲೇಮಿನ ಅರಸ - ಹೆಬ್ರೋನಿನ ಅರಸ - ಯರ್ಮೂತಿನ ಅರಸ -

11 ಲಾಕೀಷಿನ ಅರಸ - ಎಗ್ಲೋನಿನ ಅರಸ -

12 ಗೆಜೆರಿನ ಅರಸ -

13 ದೆಬೀರಿನ ಅರಸ -

14 ಗೆದೆರಿನ ಅರಸ - ಹೊರ್ಮದ ಅರಸ - ಅರಾದಿನ ಅರಸ -

15 ಲಿಬ್ನದ ಅರಸ - ಅದುಲ್ಲಾಮದ ಅರಸ -

16 ಮಕ್ಕೇದದ ಅರಸ - ಬೇತೇಲಿನ ಅರಸ -

17 ತಪ್ಪೂಹದ ಅರಸ - ಹೇಫೆರಿನ ಅರಸ -

18 ಅಷ್ಟಾರೋನಿನ ಅರಸ - ಅಫೇಕದ ಅರಸ -

19 ಮಾದೋನಿನ ಅರಸ - ಹಾಚೋರಿನ ಅರಸ - ಶಿಮ್ರೋನ್ಮೆರೋನಿನ ಅರಸ -

20 ಅಕ್ಷಾಫಿನ ಅರಸ - ತಾನಕದ ಅರಸ -

21 ಮೆಗಿದ್ದೋವಿನ ಅರಸ - ಕೆದೆಷಿನ ಅರಸ -

22 ಕರ್ಮೆಲ್ ಬೆಟ್ಟದ ಮೇಲಿರುವ ಯೊಕ್ನೆಯಾಮದ ಅರಸ -

23 ದೋರ್ ಬೆಟ್ಟದ ಮೇಲಿರುವ ದೋರಿನ ಅರಸ - ಗಿಲ್ಗಾಲಿನವರ ಅರಸ - ತಿರ್ಚದ ಅರಸ -

24 ಒಟ್ಟು ಅರಸರು ಮಂದಿ.

  • Joshua 11 — previous chapter
  • Joshua 13 — next chapter
  • Joshua 12 — English (KJV)
  • Joshua 12 — English (WEB)
  • Joshua 12 — Tamil (தமிழ்)
  • Joshua 12 — Hindi (हिंदी)
  • Joshua 12 — Malayalam (മലയാളം)