ಯೋಬ 25 (Job 25)

Kannada Bible — Kannada (ಕನ್ನಡ)

1 ಬಳಿಕ ಶೂಹ್ಯನಾದ ಬಿಲ್ದದನು ಹೀಗೆಂದನು:

2 “ದೇವರು ಮಹೋನ್ನತ ಪ್ರಭು; ಭಯಭಕ್ತಿಗೆ ಪಾತ್ರನು ಉನ್ನತಲೋಕದಲ್ಲಿ ಶಾಂತಿಸಮಾಧಾನವನು ಸ್ಥಾಪಿಸಿಹನು.

3 ಲೆಕ್ಕವಿದೆಯೇ ಆತನ ಸೇನೆಗಳಿಗೆ? ಆತನ ತೇಜಸ್ಸು ಮೂಡದಿರುವುದು ಯಾರಿಗೆ?

4 ನರನು ದೇವರ ದೃಷ್ಟಿಯಲ್ಲಿ ಸಜ್ಜನನಾಗಿರಲು ಸಾಧ್ಯವೆ? ಸ್ತ್ರೀಯರಲ್ಲಿ‌ ಹುಟ್ಟಿದವನು ಪರಿಶುದ್ಧನಾಗಿರುವುದು ಶಕ್ಯವೆ?

5 ಆತನ ದೃಷ್ಟಿಗೆ ಚಂದ್ರನೂ ಕಾಂತಿಯುತನಲ್ಲ ನಕ್ಷತ್ರಗಳೂ ನಿರ್ಮಲವಾದವುಗಳಲ್ಲ.

6 ಇಂತಿರಲು ಹುಳುವಿನಂಥ ನರನು ಏತರವನು? ಕ್ರಿಮಿಯಂಥ ನರನು ಎಷ್ಟುಮಾತ್ರದವನು?”

  • Job 24 — previous chapter
  • Job 26 — next chapter
  • Job 25 — English (KJV)
  • Job 25 — English (WEB)
  • Job 25 — Tamil (தமிழ்)
  • Job 25 — Hindi (हिंदी)
  • Job 25 — Malayalam (മലയാളം)