ಯೆರೆಮ್ಯ 45 (Jeremiah 45)

Kannada Bible — Kannada (ಕನ್ನಡ)

1 ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ [] ನೇರೀಯನ ಮಗ ಬಾರೂಕನು ಯೆರೆಮೀಯನ ಮಾತುಗಳನ್ನು ಅವನ ಬಾಯಿಂದ ಬಂದ ಹಾಗೆಯೇ ಪುಸ್ತಕದಲ್ಲಿ ಬರೆದನು. ಆಗ ಪ್ರವಾದಿ ಯೆರೆಮೀಯನು ಸರ್ವೇಶ್ವರನ ಆಜ್ಞೆಯ ಪ್ರಕಾರ ಈ ವಾಕ್ಯವನ್ನು ಬಾರೂಕನಿಗೆ ನುಡಿದನು.

2 “ಬಾರೂಕನೇ, ಇಸ್ರಯೇಲಿನ ದೇವರಾದ ಸರ್ವೇಶ್ವರ ಸ್ವಾಮಿ ನಿನಗೆ ಹೇಳುವುದನ್ನು ಕೇಳು: ನೀನು, ‘ಅಯ್ಯೋ, ನನಗೆ ಕೇಡು!

3 ವ್ಯಥೆಪಡುತ್ತಿದ್ದ ನನಗೆ ಸರ್ವೇಶ್ವರ ದುಃಖದ ಮೇಲೆ ದುಃಖ ಕಳುಹಿಸಿದ್ದಾರೆ. ನಾನು ನರಳಿ ದಣಿದು ಹೋಗಿದ್ದೇನೆ. ನನಗೆ ಯಾವ ನೆಮ್ಮದಿಯೂ ದೊರಕದಿದೆ’ ಎಂದು ಹೇಳುತ್ತಿರುವೆ ಅಲ್ಲವೆ?

4 “ಸರ್ವೇಶ್ವರನ ಈ ವಾಣಿಯನ್ನು ಕೇಳು: ‘ನೋಡು, ನಾನು ಕಟ್ಟಿದ್ದನ್ನು ನಾನೇ ಕೆಡವುತ್ತೇನೆ. ನಾನು ನೆಟ್ಟಿದ್ದನ್ನು ನಾನೇ ಕಿತ್ತುಹಾಕುತ್ತೇನೆ. ಹೌದು ಜಗದಲ್ಲೆಲ್ಲ ಹಾಗೆ ಮಾಡುತ್ತೇನೆ.

5 ನಿನಗೆ ಮಾತ್ರ ಪ್ರತ್ಯೇಕ ಸ್ಥಾನಮಾನಗಳನ್ನು ನಿರೀಕ್ಷಿಸುತ್ತಿಯೋ? ನಿರೀಕ್ಷಿಸಬೇಡ. ಹೌದು, ಮಾನವ ಜನಾಂಗವನ್ನೇ ನಾನು ದಂಡಿಸಲಿದ್ದೇನೆ. ಆದರೆ ನೀನು ಎಲ್ಲಿಗೆ ಹೋದರೂ ನಿನ್ನ ಪ್ರಾಣವೊಂದನ್ನು ಕೊಳ್ಳೆಯಂತೆ ಉಳಿಸಿಕೊಳ್ಳಲಿಕ್ಕೆ ಅವಕಾಶ ನೀಡುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.”

  • Jeremiah 44 — previous chapter
  • Jeremiah 46 — next chapter
  • Jeremiah 45 — English (KJV)
  • Jeremiah 45 — English (WEB)
  • Jeremiah 45 — Tamil (தமிழ்)
  • Jeremiah 45 — Hindi (हिंदी)
  • Jeremiah 45 — Malayalam (മലയാളം)