ಕೀರ್ತನೆಗಳು 29 (Psalms 29)

Kannada Bible — Kannada (ಕನ್ನಡ)

1 ಸುರಪುತ್ರರೇ, ಪ್ರಭುವಿನ ಸ್ತುತಿಮಾಡಿರಿ I ಬಲುಮೆ, ಮಹಿಮೆ, ಅವನದೇ ಎಂದು ಸಾರಿರಿ II

2 ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು I ಪೂಜಿಸಿರಿ ಪವಿತ್ರಾಂಬರರಾಗಿ ಆತನನು II

3 ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ I ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ I ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ II

4 ಪ್ರಭುವಿನ ಧ್ವನಿ ಶಕ್ತಿಯುತ I ಆತನ ಶಬ್ಧ ವೈಭವಯುತ II

5 ಆತನ ಗರ್ಜನೆಗೆ ಮುರಿದುಬೀಳುವುವು ದೇವದಾರು ಮರಗಳು I ಹೌದ್ಹೌದು, ಸೀಳಿ ಹೋಳಾಗುವುವು ಲೆಬನೋನಿನ ಮಹಾ ವೃಕ್ಷಗಳು II

6 ಜಿಗಿಯುವುದು ಲೆಬನೋನ್ ಪರ್ವತ ಎಳೆಗರುವಿನಂತೆ I ನೆಗೆಯುವುದು ಗಿರಿ ಸಿಯೋನ್ ಕಾಡೆಮ್ಮೆಯ ಕರುವಂತೆ II

7 ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು I ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು II

9 ಈಯುವುವು ಜಿಂಕೆಗಳು, ನಗ್ನವಾಗುವುವು ವೃಕ್ಷಗಳು I ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು II

10 ಜಲಪ್ರಳಯದೊಳು ಪ್ರಭು ಆಸೀನನಾಗಿಹನು I ಯುಗಯುಗಾಂತರಕು ಅರಸನಾಗಿ ಆಳುವನು II

11 ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ‍ ಶಕ್ತಿಯನು I ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು II

  • Psalms 28 — previous chapter
  • Psalms 30 — next chapter
  • Psalms 29 — English (KJV)
  • Psalms 29 — English (WEB)
  • Psalms 29 — Tamil (தமிழ்)
  • Psalms 29 — Hindi (हिंदी)
  • Psalms 29 — Malayalam (മലയാളം)