ಅರಣ್ಯಕಾಂಡ 26 (Numbers 26)

Kannada Bible — Kannada (ಕನ್ನಡ)

1 ಆ ದೊಡ್ಡರೋಗ ನಿಂತ ಮೇಲೆ ಸರ್ವೇಶ್ವರ ಸ್ವಾಮಿ ಮೋಶೆಗೆ ಮತ್ತು ಆರೋನನ ಮಗ ಎಲ್ಲಾಜಾರನಿಗೆ:

2 “ನೀವು ಇಸ್ರಯೇಲ ಸಮಾಜದವರಲ್ಲಿ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರನ್ನು ಅಂದರೆ ಸೈನಿಕಸೇವೆಗೆ ಅರ್ಹರಾದವರನ್ನು ಗೋತ್ರ ಗೋತ್ರಗಳ ಪ್ರಕಾರ ಜನಗಣತಿ ಮಾಡಿ,” ಎಂದು ಹೇಳಿದರು.

3 ಅಂತೆಯೇ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಜನಗಣತಿ ಮಾಡಿದರು.

4 ಸರ್ವೇಶ್ವರ ಮೋಶೆಗೂ ಈಜಿಪ್ಟಿನಿಂದ ಬಂದಿದ್ದ ಇಸ್ರಯೇಲರಿಗೂ ಆಜ್ಞಾಪಿಸಿದ್ದಂತೆ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಇಸ್ರಯೇಲರನ್ನು ಲೆಕ್ಕಿಸಿದರು: ಅದರ ವಿವರ ಇದು.

5 ಯಕೋಬನ ಜೇಷ್ಠ ಪುತ್ರನಾದ ರೂಬೇನನ ವಂಶಸ್ಥರು ಇವರು: ಹನೋಕನಿಂದ ಹನೋಕ್ಯರು, ಪಲ್ಲೂವಿನಿಂದ ಪಲ್ಲೂವಿನವರು,

6 ಹೆಚ್ರೋನನಿಂದ ಹೆಚ್ರೋನ್ಯರು ಹಾಗು ಕರ್ಮೀಯನಿಂದ ಕರ್ಮೀಯರು.

7 ರುಬೇನ್ಯರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ ,:

8 ಪಲ್ಲೂವಿನ ಮಗ ಎಲೀಯಾಬ್;

9 ಎಲೀಯಾಬನ ಮಕ್ಕಳು ಇವರು - ನೆಮೂವೇಲ್, ದಾತಾನ್ ಮತ್ತು ಅಬೀರಾಮ್, ಕೋರಹನ ಪಂಗಡದವರು ಸರ್ವೇಶ್ವರನಿಗೆ ವಿರುದ್ಧ ವಾದಿಸಿದ ಕಾಲದಲ್ಲಿ ಅವರೊಂದಿಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧ ಪ್ರತಿಭಟಿಸಿದ ಆಲೋಚನಾಕರ್ತರು ದಾತಾನ್ ಮತ್ತು ಅಬೀರಾಮ್.

10 ಇವರನ್ನು ಹಾಗು ಕೋರಹನನ್ನು ಭೂಮಿ ಬಾಯ್ದೆರೆದು ನುಂಗಿಬಿಟ್ಟಿತು. ಆ ಪಂಗಡದವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ಬೆಂಕಿ ಸುಟ್ಟು ಹಾಕಿತು. ಹೀಗೆ ಇಸ್ರಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು.

11 ಆ ಪಂಗಡದವರೆಲ್ಲರು ಸತ್ತರು. ಆದರೆ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.

12 ಸಿಮೆಯೋನ್ ಕುಲದ ಕುಟುಂಬಗಳು ಇವು: ನೆಮೂವೇಲನಿದ ನೆಮೂವೇಲ್ಯರು, ಯಾಮೀನನಿದ ಯಾಮೀನ್ಯರು, ಯಾಕೀನನಿದ ಯಾಕೀನ್ಯರು,

13 ಜೆರಹನಿಂದ ಜೆರಹಿಯರು, ಸೌಲನಿಂದ ಸೌಲ್ಯರು ಎಬ ವಶಸ್ಥರು.

14 ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಖ್ಯೆ: ,:

15 ಗಾದ್ ಕುಲದ ಕುಟುಬಗಳು ಇವು: ಚೆಫೋನನಿದ ಚೆಫೋನ್ಯರು, ಹಗ್ಗೀಯನಿದ ಹಗ್ಗೀಯರು, ಶೂನೀಯನಿದ‍ ‍ಶೂನೀಯರು,

16 ಒಜ್ನೀಯನಿದ ಒಜ್ನೀಯರು, ಏರೀಯನಿದ ಏರೀಯರು,

17 ಆರೋದನಿದ ಆರೋದ್ಯರು, ಅರೇಲೀಯನಿದ ಅರೇಲಿಯರು ಎಬ ವಶಸ್ಥರು.

18 ಗಾದ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಖ್ಯೆ: ,:

19 ಯೆಹೂದನ ಮಕ್ಕಳಲ್ಲಿ ಏರ್, ಓನಾನ್ಯರು ಕಾನಾನ ನಾಡಿನಲ್ಲಿ ಸತ್ತರು.

20 ಯೆಹೂದ ಕುಲದಲ್ಲಿ ಉಳಿದ ಕುಟುಬಗಳು ಇವು - ಶೆಲಹನಿದ ಶೇಲಾನ್ಯರು, ಪೆರೆಚನಿದ ಪೆರೆಚ್ಯರು, ಹಾಗು ಜೆರಹನಿದ ಜೆರಹಿಯರು.

21 ಪೆರಚನಿದ ಬೆಳೆದ ಕುಟುಬಗಳು - ಹೆಚ್ರೋನನಿದ ಹೆಚ್ರೋನ್ಯರು ಮತ್ತು ಹಾಮೂಲನಿದ ಹಾಮೂಲ್ಯರು ಎಬ ವಶಸ್ಥರು.

22 ಯೆಹೂದ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಖ್ಯೆ: ,:

23 ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ - ತೋಲನಿಂದ ತೋಲಾಯರು, ಪುವ್ವನಿಂದ ಪೂನ್ಯರು,

24 ಯಾಶೂಬನಿಮದ ಯಶೂಬ್ಯರು ಮತ್ತು ಶಿಮ್ರೋನನಿಂದ ಶಿಮ್ರೋನ್ಯರು ಎಂಬ ವಂಶಸ್ಥರು.

25 ಇಸ್ಸಾಕಾರ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : ,:

26 ಜೆಬುಲೂನ್ ಕುಲದ ಕುಟುಂಬಗಳು ಇವು - ಸೆರೆದನಿಂದ ಸೆರೆದ್ಯರು, ಏಲೋನನಿಂದ ಏಲೋನ್ಯರು ಮತ್ತು ಯಹಲೇಲನಿಂದ ಯಹಲೇಲ್ಯರು.

27 ಜೆಬುಲೂನ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : ,:

28 ಜೋಸೆಫನ ಮಕ್ಕಳು ಮನಸ್ಸೆ ಮತ್ತು ಎಫ್ರಾಯಿಮ್.

29 ಮನಸ್ಸೆ ಕುಲದ ಕುಟುಂಬಗಳು ಯಾವುವೆಂದರೆ - ಮಾಕೀರನಿಂದ ಮಾಕೀರ್ಯರು ಮತ್ತು ಮಾಕೀರನ ಮಗ ಗಿಲ್ಯಾದನಿಂದ ಗಿಲ್ಯಾದ್ಯರು ಎಂಬ ವಂಶಸ್ಥರು.

30 ಗಿಲ್ಯಾದನ ವಂಶದವರು ಇವರು : ಈಯೆಜೆರನಿಂದ ಈಯೆಜೆರ್ಯರು, ಹೇಲಿಕನಿಂದ ಹೇಲಿಕ್ಯರು,

31 ಅಸ್ರೀಯೇಲನಿಂದ ಅಸ್ರೀಯೇಲ್ಯರು, ಶೆಕೆಮನಿಂದ ಶೆಕೆಮ್ಯರು,

32 ಶೆಮೀದಾಯನಿಂದ ಶೆಮೀದಾಯರು ಮತ್ತು ಹೇಫೆರನಿಂದ ಹೇಫೆರ್ಯರು ಎಂಬ ವಂಶಸ್ಥರು.

33 ಹೇಫೆಕನ ಮಗ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡು ಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣು ಮಕ್ಕಳ ಹೆಸರು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ.

34 ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : ,:

35 ಎಫ್ರಯಿಮ್ ಕುಲದ ಕುಟುಂಬಗಳು ಇವು - ಶೂತೆಲಹನಿಂದ ಶೂತೆಲಹ್ಯರು, ಬೆಕೆರನಿಂದ ಬೆಕೆರ್ಯರು, ತಹನನಿಂದ ತಹನಿಯರು.

36 ಶೂತೆಲಹನ ಮಗ ಏರಾನನಿಂದ ಏರಾನ್ಯರು ಎಂಬ ವಂಶಸ್ಥರು. ಎಫ್ರಯಿಮ್ ಕುಲದವರಾದ

37 ಇವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : ,: ಇದೇ ಜೋಸೆಫ್ ವಂಶದ ಕುಟುಂಬಗಳ ವಿವರ.

38 ಬೆನ್ಯಾಮೀನ್ ಕುಲದ ಕುಟುಂಬಗಳ ಹೆಸರು ಹೀಗಿದೆ - ಬೆಲಗನಿಂದ ಬೆಲಗ್ಯರು,ಅಷ್ಬೇಲನಿಂದ ಅಷ್ಬೇಲ್ಯರು, ಅಹೀರಾಮನಿಂದ ಅಹೀರಾಮ್ಯರು,

39 ಶೂಫಾಮನಿಂದ ಶೂಫಾಮ್ಯರು, ಹೂಫಾಮನಿಂದ ಹೂಫಾಮ್ಯರು ಎಂಬ ವಂಶಸ್ಥರು.

40 ಬೆಲಗನಿಗೆ ಅರ್ದ್ ಮತ್ತು ನಾಮಾನ್ ಎಂಬ ಇಬ್ಬರು ಮಕ್ಕಳಿದ್ದರು. ಅರ್ದನಿಂದ ಅರ್ದ್ಯರು ಮತ್ತು ನಾಮಾನನಿಂದ ನಾಮಾನ್ಯರು ಎಂಬ ವಂಶಸ್ಥರಾದರು.

41 ಬೆನ್ಯಾಮೀನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : ,:

42 ದಾನ್ ಕುಲದ ಕುಟುಂಬಗಳು ಇವು: ಶೂಹಾಮನಿಂದ ಶೂಹಾಮ್ಯರು ಎಂಬ ವಂಶಸ್ಥರು.

43 ದಾನ್ ಕುಲದವರಲ್ಲಿ ಲೆಕ್ಕಿತರಾದವರ ಸಂಖ್ಯೆ: ,:

44 ಅಶೇರ್ ಕುಲದ ಕುಟುಂಬಗಳ ಹೆಸರು ಇವು: ಇಮ್ಮಾಹನಿಂದ ಇಮ್ಮಾಹ್ಯರು, ಇಷ್ವೀಯನಿಂದ ಇಷ್ವೀಯರು ಮತ್ತು ಬೆರೀಯನಿಂದ ಬೆರೀಯ ವಂಶಸ್ಥರು.

45 ಬೆರೀಯನ ಮಕ್ಕಳಿಂದ ಉಂಟಾದ ಕುಟುಂಬಗಳು ಇವು - ಹೇಬೆರನಿಂದ ಹೇಬೆರ್ಯರು ಮತ್ತು ಮಲ್ಕಿಯೇಲನಿಂದ ಮಲ್ಕಿಯೇಲ್ಯರು.

46 ಆಶೇರನಿಗೆ ಸೆರಹಳೆಂಬ ಮಗಳು ಸಹ ಇದ್ದಳು.

47 ಆಶೇರ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ: ,:

48 ನಫ್ತಾಲಿ ಕುಲದ ಕುಟುಂಬಗಳು ಯಾವುವೆಂದರೆ - ಯಹಚೇಲನಿಂದ ಯಹಚೇಲ್ಯರು, ಗೂನೀಯನಿಂದ ಗೂನೀಯರು,

49 ಯೇಚೆರನಿಂದ ಯೇಚೆರ್ಯರು ಮತ್ತು ಶಿಲ್ಲೇಮನಿಂದ ಶಿಲ್ಲೇಮ್ಯರು,

50 ನಫ್ತಾಲಿ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : ,:

51 ಇಸ್ರಯೇಲರಲ್ಲಿ ಲೆಕ್ಕಿತರಾದವರ ಒಟ್ಟು ಸಂಖ್ಯೆ ; ,:

52 ಸರ್ವೇಶ್ವರ ಸ್ವಾಮಿ ಮೋಶೆಗೆ,

53 “ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ನಾಡನ್ನು ಸ್ವಂತ ನಾಡಾಗಿ ಹಂಚಿಕೊಡು.

54 ಹೆಚ್ಚುಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿ ಒಂದು ಕುಲಕ್ಕೆ ಭೂಮಿಯನ್ನು ಸೊತ್ತಾಗಿ ಕೊಡು.

55 ಪ್ರತಿಯೊಂದು ಕುಲದ ಮೂಲಪುರುಷನ ಹೆಸರನ್ನು ಬರೆದು ಚೀಟು ಹಾಕಿ ಆಯಾ ಕುಲಕ್ಕೆ ಸೊತ್ತನ್ನು ಗೊತ್ತುಮಾಡು.

56 ಹೆಚ್ಚು ಮಂದಿಯುಳ್ಳ ಕುಲಕ್ಕಾಗಲಿ, ಕಡಿಮೆ ಮಂದಿಯುಳ್ಳ ಕುಲಕ್ಕಾಗಲಿ ಚೀಟು ಬಂದ ಪ್ರಕಾರವೇ ಸೊತ್ತನ್ನು ಗೊತ್ತುಮಾಡು.

57 ಲೇವಿಯರಲ್ಲಿ ಎಣಿಕೆಯಾದ ಕುಟುಂಬಗಳು ಇವು : ಗೇರ್ಷೋನನಿಂದ ಗೇರ್ಷೋನ್ಯರು, ಕೆಹಾತನಿಂದ ಕೆಹಾತ್ಯರು ಮತ್ತು ಮೆರಾರೀಯನಿಂದ ಮೆರಾರೀಯರು, ಎಂಬ ವಂಶಸ್ಥರು.

58 ಲೇವಿ ಕುಲದವರ ಕುಟುಂಬಗಳು ಯಾವುವೆಂದರೆ - ಲಿಬ್ನೀ, ಹೆಬ್ರೋನ್, ಮಹ್ಲೀಯ, ಮೂಷೀಯ ಮತ್ತು ಕೋರಹಿಯ ಎಂಬ ಕುಟುಂಬಗಳು.

59 ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿ ಈಜಿಪ್ಟ್ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದ ಎಂಬವಳು. ಈಕೆಯಲ್ಲಿ ಅಮ್ರಾಮನಿಂದ ಆರೋನ, ಮೋಶೆ ಮತ್ತು ಅಕ್ಕ ಮಿರ್ಯಾಮಳೂ ಹುಟ್ಟಿದರು.

60 ಆರೋನನಿಂದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬವರು ಹುಟ್ಟಿದರು.

61 ನಾದಾಬ್ ಮತ್ತು ಅಬೀಹೂ ಎಂಬ ಇಬ್ಬರು ಸರ್ವೇಶ್ವರನ ಸನ್ನಿಧಿಯಲ್ಲಿ ಬಹಿಷ್ಕೃತ ಅಗ್ನಿಯಿಂದ ಧೂಪಾರತಿ ಎತ್ತಿದುದರಿಂದ ಸತ್ತುಹೋದರು.

62 ಬೇರೆ ಇಸ್ರಯೇಲರಿಗೆ ಸೊತ್ತು ದೊರಕಿದಂತೆ ಲೇವಿಯರಿಗೆ ದೊರಕದೆ ಹೋದುದರಿಂದ ಅವರು ಇಸ್ರಯೇಲರ ಸಮೇತ ಎಣಿಕೆ ಆಗಲಿಲ್ಲ. ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನು ಲೆಕ್ಕ ಹಾಕಿದಾಗ ಅವರ ಸಂಖ್ಯೆ : , ಇತ್ತು.

63 ಜೋರ್ಡನ್ ನದಿ ತೀರದಲ್ಲಿ, ಜೆರಿಕೋ ಪಟ್ಟಣದ ಹತ್ತಿರವಿದ್ದ ಮೋವಾಬ್ಯರ ಮೈದಾನದಲ್ಲಿ ಮೋಶೆ ಮತ್ತು ಯಾಜಕ ಎಲ್ಲಾಜಾರನು ಇಸ್ರಯೇಲರ ಜನಗಣತಿ ಮಾಡಿದಾಗ ಇದ್ದ ಜನಸಂಖ್ಯೆ ಇದು.

64 ಮೋಶೆ ಮತ್ತು ಯಾಜಕ ಆರೋನನು ಸೀನಾಯಿ ಮರುಭೂಮಿಯಲ್ಲಿ ಇಸ್ರಯೇಲರ ಜನಗಣತಿ ಮಾಡಿದಾಗ ಎಣಿಕೆಯಾದವರಲ್ಲಿ ಒಬ್ಬರಾದರೂ ಇವರಲ್ಲಿರಲಿಲ್ಲ.

65 ಏಕೆಂದರೆ ನಿಶ್ಚಯವಾಗಿ ಅವರು ಮರುಭೂಮಿಯಲ್ಲೇ ಸಾಯುವರೆಂದು ಸರ್ವೇಶ್ವರ ಸ್ವಾಮಿ ಹೇಳಿದ್ದರು. ಆದ್ದರಿಂದ ಯೆಫುನ್ನೆಯ ಮಗ ಕಾಲೇಬ್ ಮತ್ತು ನೂನನ ಮಗ ಯೆಹೋಶುವ ಇವರಿಬ್ಬರನ್ನು ಬಿಟ್ಟರೆ ಅವರಲ್ಲಿ ಯಾರೂ ಉಳಿಯಲಿಲ್ಲ.

  • Numbers 25 — previous chapter
  • Numbers 27 — next chapter
  • Numbers 26 — English (KJV)
  • Numbers 26 — English (WEB)
  • Numbers 26 — Tamil (தமிழ்)
  • Numbers 26 — Hindi (हिंदी)
  • Numbers 26 — Malayalam (മലയാളം)