ಆದಿಕಾಂಡ 5 (Genesis 5)

Kannada Bible — Kannada (ಕನ್ನಡ)

1 ಆದಾಮನ ವಂಶದವರ ಚರಿತ್ರೆ: ಸೃಷ್ಟಿಕಾಲದಲ್ಲಿ ದೇವರು ಮಾನವನನ್ನು ತಮ್ಮ ಹೋಲಿಕೆಯಂತೆಯೇ ಸೃಷ್ಟಿಮಾಡಿದರು.

2 ಅವರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಮಾಡಿದರು. ಅಂದೇ ಅವರನ್ನು ಆಶೀರ್ವದಿಸಿ ಅವರಿಗೆ ‘ಮನುಷ್ಯ’ರೆಂದು ಹೆಸರಿಟ್ಟರು.

3 ಆದಾಮನು ವರ್ಷದವನಾದಾಗ ರೂಪದಲ್ಲಿ ತನ್ನಂತೆಯೇ ಇದ್ದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.

4 ಸೇತನು ಹುಟ್ಟಿದ ಮೇಲೆ ಆದಾಮನು ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು.

5 ಸತ್ತಾಗ ಅವನಿಗೆ ವರ್ಷಗಳಾಗಿದ್ದವು.

6 ಸೇತನು ವರ್ಷದವನಾದಾಗ ಎನೋಷನನ್ನು ಪಡೆದನು.

7 ಎನೋಷನು ಹುಟ್ಟಿದ ಮೇಲೆ ಅವನು ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳೂ ಇದ್ದರು.

8 ಸತ್ತಾಗ ಅವನಿಗೆ ವರ್ಷಗಳಾಗಿದ್ದವು.

9 ಎನೋಷನು ವರ್ಷದವನಾದಾಗ ಕೇನಾನನ್ನು ಪಡೆದನು.

10 ಕೇನಾನನು ಹುಟ್ಟಿದ ಮೇಲೆ ಎನೋಷನು ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳೂ ಇದ್ದರು.

11 ಸತ್ತಾಗ ಅವನಿಗೆ ಒಟ್ಟು ವರ್ಷಗಳಾಗಿದ್ದವು.

12 ಕೇನಾನನು ವರ್ಷದವನಾದಾಗ ಮಹಲಲೇಲನನ್ನು ಪಡೆದನು.

13 ಮಹಲಲೇಲನು ಹುಟ್ಟಿದ ಮೇಲೆ ಕೇನಾನನು ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.

14 ಸತ್ತಾಗ ಅವನಿಗೆ ಒಟ್ಟು ವರ್ಷಗಳಾಗಿದ್ದವು.

15 ಮಹಲಲೇಲನು ವರ್ಷದವನಾದಾಗ ಯೆರೆದನನ್ನು ಪಡೆದನು.

16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.

17 ಸತ್ತಾಗ ಅವನಿಗೆ ಒಟ್ಟು ವರ್ಷಗಳಾಗಿದ್ದುವು.

18 ಯೆರೆದನು ವರ್ಷದವನಾದಾಗ ಹನೋಕನನ್ನು ಪಡೆದನು.

19 ಹನೋಕನು ಹುಟ್ಟಿದ ಮೇಲೆ ಯೆರೆದನು ವರ್ಷ ಬದುಕಿದನು.

20 ಸತ್ತಾಗ ಅವನಿಗೆ ಒಟ್ಟು ವರ್ಷಗಳಾಗಿದ್ದವು.

21 ಹನೋಕನು ವರ್ಷದವನಾದಾಗ ಮೆತೂಷೆಲಹನನ್ನು ಪಡೆದನು.

22 ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ದೇವರಲ್ಲಿ ಅನ್ಯೋನ್ಯತೆಯಿಂದ ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.

23 ಅವನು ಬದುಕಿದ ಕಾಲವೆಲ್ಲ ವರ್ಷಗಳು.

24 ಹನೋಕ ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇದ್ದಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾದನು.

25 ಮೆತೂಷೆಲಹನು ವರ್ಷದವನಾದಾಗ ಲೆಮೆಕನನ್ನು ಪಡೆದನು.

26 ಲೆಮೆಕನು ಹುಟ್ಟಿದ ಮೇಲೆ ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.

27 ಸತ್ತಾಗ ಅವನಿಗೆ ಒಟ್ಟು ವರ್ಷಗಳಾಗಿದ್ದವು.

28 ಲೆಮೆಕನು ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು.

29 ಪ್ರಭು ಶಪಿಸಿದ ಭೂಮಿಯಲ್ಲಿ ನಾವು ಕೈಕೆಸರಾಗಿಸಿಕೊಂಡು ಪಡುವ ಶ್ರಮೆಯಲ್ಲಿ ಈ ಮಗನು ಉಪಶಮನ ತರುವನು ಎಂದುಕೊಂಡು ಅವನಿಗೆ ನೋಹ [] ಎಂದು ಹೆಸರಿಟ್ಟನು.

30 ನೋಹನು ಹುಟ್ಟಿದ ಮೇಲೆ ಲೆಮೆಕನು ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.

31 ಸತ್ತಾಗ ಅವನಿಗೆ ಒಟ್ಟು ವರ್ಷಗಳಾಗಿದ್ದವು.

32 ನೋಹನು ವರ್ಷದವನಾದಾಗ ಶೆಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.

  • Genesis 4 — previous chapter
  • Genesis 6 — next chapter
  • Genesis 5 — English (KJV)
  • Genesis 5 — English (WEB)
  • Genesis 5 — Tamil (தமிழ்)
  • Genesis 5 — Hindi (हिंदी)
  • Genesis 5 — Malayalam (മലയാളം)